ಬೆನಿಟ್, ಏಬ್ರಹಾಮ್
1750-99.  ಸ್ಥಾಯೀ ವಿದ್ಯುತ್ತಿನ (ಸ್ಟ್ಯಾಟಿಕ್ ಎಲೆಕ್ಟ್ರಿಸಿಟಿ) ಅಧ್ಯಯನ ನಡೆಸಿದ ಆಂಗ್ಲ ಭೌತವಿಜಾÐನಿ.  ಸುವರ್ಣಪತ್ರ ವಿದ್ಯುತ್‍ದರ್ಶಕ (ಗೋಲ್ಡ್ ಲೀಫ್ ಎಲೆಕ್ಟ್ರೊಸ್ಕೋಪ್) ವಿದ್ಯುತ್ ವಿಭವಾಂತರವನ್ನು (ಪೋಟೆನ್ಸಿಯಲ್ ಡಿಫರೆನ್ಸ್) ಅಳೆಯಲು ಉಪಯೋಗಿಸುವ ಒಂದು ಸರಳ ಉಪಕರಣ. ವಿದ್ಯುದಾವೇಶದ ಅಸ್ತಿತ್ವವನ್ನು ಕೂಡ ಇದರಿಂದ ತಿಳಿಯಬಹುದು. ಇದನ್ನು ತಯಾರಿಸಿದವ ಏಬ್ರಹಾಮ್ ಬೆನಿಟ್. ಇಷ್ಟೇ ಅಲ್ಲ ಸ್ಥಾಯಿ ವಿದ್ಯುದಾವೇಶವನ್ನು ಪ್ರತ್ಯೇಕಿಸಿ ಹಿಡಿದಿರಿಸಬಲ್ಲ ಪ್ರೇರಣಯಂತ್ರ (ಇಂಡಕ್ಷನ್ ಮಮಿನ್)  ಕೂಡ ರೂಪಿಸಿದ.
  (ಎ.ಕೆ.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ